ಶನಿವಾರ, ಸೆಪ್ಟೆಂಬರ್ 3, 2011

ಅಕ್ಕಿ ಹೆಬ್ಬಾಳಿಗೆ ಹೇಮಾವತಿ

* ಎಚ್. ಆರ್. ಲೋಕೇಶ್ ಕೆ.ಆರ್.ಪೇಟೆ
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ೨೮ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಲ ಸನ್ನಿಹಿತವಾಗಿದೆ. ಕೆಲವೇ ದಿನಗಳಲ್ಲಿ  ಈ ಗ್ರಾಮಗಳಿಗೆ ಹೇಮಾವತಿ ನದಿ ನೀರು ಲಭ್ಯವಾಗಲಿದೆ.
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರೂಪಿಸಲಾದ ರಾಜೀವ್‌ಗಾಂಧಿ ಕುಡಿಯುವ ನೀರಿನ ಸಮಗ್ರ ಯೋಜನೆಯಡಿ ೨೮ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ತಮ್ಮೂರಿನ ಪಕ್ಕದಲ್ಲೇ ಹೇಮಾವತಿ ನದಿ ಹರಿಯುತ್ತಿದ್ದರೂ  ಪ್ರತಿ ಬೇಸಿಗೆಯಲ್ಲೂ ಈ ಭಾಗದ ಜನರು ನೀರಿನ ತೊಂದರೆ ಅನುಭವಿಸು ತ್ತಲೇ ಇದ್ದರು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ  ಈ ನದಿಯಿಂದಲೇ ನೀರು ಪೂರೈಸುವ ಯೋಜನೆ ಸಿದ್ಧವಾಗಿದೆ. ೨೦೦೮ರಲ್ಲಿ ಆರಂಭಗೊಂಡ ಈ ಯೋಜನೆ ಅಂತಿಮಘಟ್ಟ ತಲುಪಿದೆ. ಇಡೀ ಯೋಜನೆಗೆ ೮.೨೦ ಕೋಟಿ ರೂ. ವೆಚ್ಚವಾಗಿದೆ. ಒಮ್ಮೆಗೆ  ಐದು ಗ್ರಾಮಗಳಂತೆ ಐದಾರು ಹಂತ ಗಳಲ್ಲಿ ಎಲ್ಲ  ೨೮ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ