ಬುಧವಾರ, ಜುಲೈ 27, 2011

ಶಿಥಿಲ ಕಟ್ಟಡವೇ ಜ್ಞಾನ ದೇಗುಲ !

 ಕೆ.ಎಚ್. ರೆಹಮಾನ್ ಹಲಗೂರು
ಇಲ್ಲೊಂದು ಸರಕಾರಿ ಶಾಲೆ ಇದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಗಮನ ಸೆಳೆದಿದೆ. ಆದರೇನು ಪ್ರಯೋಜನ ? ಶಾಲೆಗೆ ಸ್ವಂತ ಕಟ್ಟಡ ಮತ್ತು ಮೂಲ ಸೌಕರ್ಯಗಳೇ ಇಲ್ಲ. ಶಿಥಿಲ ಗೊಂಡ ಹಳೆ ಮನೆಯೇ ಈಗ ಮಕ್ಕಳ ಪಾಲಿಗೆ ಜ್ಞಾನ ದೇಗುಲ !

ಬುಧವಾರ, ಜುಲೈ 20, 2011

ವಿಕ ಫೋನ್ ಇನ್ ನಲ್ಲಿ ಕೃಷಿ ಅಧಿಕಾರಿ

ವಿಕ ಸುದ್ದಿಲೋಕ ಮಂಡ್ಯ
ವ್ಯವಸ್ಥೆಯೋ,ಅವ್ಯವಸ್ಥೆಯೋ? ರೈತರು ಮಾತ್ರ ಅತಂತ್ರರಾಗುವುದರ ಜತೆಗೆ ಪರಾವಲಂಬಿಗಳಾಗುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಯಿತು. ರೈತರಿ ಗಾಗಿಯೇ ಆಯೋಜಿಸಿದ್ದ  ವಿಶೇಷ ಕಾರ್ಯಕ್ರಮದಲ್ಲಿ ಬಹಿರಂಗ ಗೊಂಡ  ಈ ವಿಷಯ ಚಿಂತನೆಗೆ ಹಚ್ಚಿತು.
ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಕಾರ್ಯಾ ರಂಭ ವಾಗಿರುವ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ಕೃಷಿ ಇಲಾಖೆಯಿಂದ ಸಲಹೆ ಮಾರ್ಗದರ್ಶನ ದೊರಕಿ ಸುವ ಸಲುವಾಗಿ ಪತ್ರಿಕೆಯ ಮಂಡ್ಯ ಕಾರ್ಯಾಲಯದಲ್ಲಿ  ಮಂಗಳ ವಾರ  `ವಿಕ ಫೋನ್ ಇನ್' ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಕೃಷಿ ಇಲಾಖೆ ಜಿಲ್ಲಾ ಜಂಟಿ ಉಪ ನಿದೇರ್ಶಕ ಕೆ. ಸಂಗಯ್ಯ ಓದುಗರ ಜತೆಗೆ ಮುಖಾಮುಖಿ ಯಾದರು. ತಾಂತ್ರಿಕ ಅಧಿಕಾರಿಗಳಾದ ಪ್ರಕಾಶ್ ಮತ್ತು ಶ್ರೀಹರ್ಷ ಹಾಜ ರಿದ್ದು  ಇಲಾಖೆ  ಚಟುವಟಿಕೆಗಳ ಅಂಕಿಅಂಶ ನೀಡಿದರು.

ಶುಕ್ರವಾರ, ಜುಲೈ 15, 2011

ಕೆರೆಗೆ ಸೇರುತಿದೆ ಕೊಳಚೆ ನೀರು !

ಮಲಿನವಾಗುತಿದೆ ಗುತ್ತಲು-ಯತ್ತಗದಹಳ್ಳಿ ಕೆರೆ
ನವೀನ್ ಮಂಡ್ಯ
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ನಗರದ ಹೊರವಲಯದ ಗುತ್ತಲು-ಯತ್ತಗದಹಳ್ಳಿ ಕೆರೆ ನೀರು ಮಲಿನವಾಗುತ್ತಿದೆ. ಮಂಡ್ಯದ ವಿವಿಧ ಬಡಾವಣೆಗಳ ಕೊಳಚೆ ನೀರು ಕೆರೆಯನ್ನು ಸೇರುತ್ತಿರುವುದು ಇದಕ್ಕೆ ಪ್ರಮುಖ ಕಾರಣ.
ಕೆರೆ ದಡಕ್ಕೆ ನಗರದ ತ್ಯಾಜ್ಯ ವಸ್ತುಗಳನ್ನು ಸುರಿಯುತ್ತಿ ರುವ ನಗರಸಭೆ ಈಗ ಮೋರಿ ಮತ್ತು ಒಳಚರಂಡಿಯ ಮಲಿನ ನೀರನ್ನು ಕೆರೆಗೆ ಬಿಡುವ ಮೂಲಕ ಮತ್ತೊಂದು ತಪ್ಪು ಮಾಡುತ್ತಿದೆ. ಜಿಲ್ಲಾಸ್ಪತ್ರೆಯ ತ್ಯಾಜ್ಯ ನೀರು ಸಹ ಕೆರೆ ಸೇರುತ್ತಿದೆ. ಇದರಿಂದ ಕೆರೆ ಮೂಲಕ್ಕೆ ಧಕ್ಕೆ ಉಂಟಾಗು ತ್ತಿದೆ. ನೀರಿನಲ್ಲಿನ ಮೀನುಗಳು ಅಪಾಯ ಎದುರಿಸುತ್ತಿವೆ.

ಬುಧವಾರ, ಜುಲೈ 13, 2011

ಬಂಗಾರದೊಡ್ಡಿ ನಾಲೆ ಅಪಾಯದಲ್ಲಿ !

ವಿಕ ವಿಶೇಷ ಶ್ರೀರಂಗಪಟ್ಟಣ
ಪಟ್ಟಣದ ಹೊರವಲಯದ ಗಂಜಾಂ ಬಳಿ ಶ್ರೀ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರು ನಿರ್ಮಿಸಿರುವ  ಬಂಗಾರದೊಡ್ಡಿ  ನಾಲೆ  ಅಪಾಯದ ಅಂಚಿನಲ್ಲಿದೆ.
ಕುಡಿಯುವ ನೀರು ಪೂರೈಕೆ ಹಾಗೂ ಗಂಜಾಂ ವ್ಯಾಪ್ತಿಯ ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸುವ ಸದುದ್ದೇಶದಿಂದ ೩೬೦ ವರ್ಷಗಳ ಹಿಂದೆ ಕಾವೇರಿ ನದಿಗೆ ಅಡ್ಡಲಾಗಿ ಒಡ್ಡು ಕಟ್ಟಿ  ಪಕ್ಕದಲ್ಲೇ  ಈ ನಾಲೆ ನಿರ್ಮಿಸಲಾಗಿದೆ.

ಸೋಮವಾರ, ಜುಲೈ 11, 2011

ಮಾರ್ಗಸೂಚಿ ಇದೆ ಮಾಹಿತಿ ಇಲ್ಲ

ಕುವೆಂಪುನಗರ ಮತ್ತು ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಮಾರ್ಗ ಸೂಚಿ ಕೊರತೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ.
ಹತ್ತು ವರ್ಷಗಳ ಹಿಂದೆ ಹೌಸಿಂಗ್ ಬೋರ್ಡ್‌ನವರು ಅಡ್ಡರಸ್ತೆ ಮತ್ತು ಮುಖ್ಯ ರಸ್ತೆಗಳನ್ನು ಹೆಸರಿಸಿ ಮಾರ್ಗಸೂಚಿ ಹಾಕಿದ್ದರು. ಅದೀಗ ಸಂಪೂರ್ಣ ಹಾಳಾಗಿವೆ. ಸುಸ್ಥಿತಿಯಲ್ಲಿರುವ ನಾಮಫಲಕಗಳಲ್ಲಿ ಸೂಚನಾ ಮಾಹಿತಿ ಅಳಿಸಿಹೋಗಿದೆ.

ಸೋಮವಾರ, ಜುಲೈ 4, 2011


ಶ್ರೀರಂಗನೆದುರೇ ಪ್ರವಾಸಿಗರಿಗೆ ಪಂಗನಾಮ !

ಜಿ.ಎನ್.ರವೀಶ್‌ಗೌಡ/ ಎಸ್. ಕೆ. ಚಂದ್ರಶೇಖರ್ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣದ ಪ್ರಮುಖ ಪ್ರವಾಸಿ ತಾಣಗಳಾದ ನಿಮಿಷಾಂಬ ದೇವಾಲಯ, ಸಂಗಮ ಹಾಗೂ ಗೋಸಾಯಿಘಾಟ್‌ನಲ್ಲಿ ಪಾರ್ಕಿಂಗ್ ನೆಪದಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ.
ಟೆಂಡರ್ ಪಡೆದಿರುವ ಗುತ್ತಿಗೆದಾರರು ನಿಗದಿಗಿಂತ ಅಧಿಕ ಹಣವಿರುವ ಟಿಕೆಟ್‌ಗಳನ್ನು ಮುದ್ರಿಸಿ ಪ್ರವಾಸಿಗರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ.