ಶುಕ್ರವಾರ, ಸೆಪ್ಟೆಂಬರ್ 9, 2011

ಮರಳಾಯಿತು,ಈಗ ಮಣ್ಣಿಗೆ `ಮರುಳು'!

ಶಿವನಂಜಯ್ಯ ಮದ್ದೂರು
ರಾಜ್ಯದಲ್ಲೀಗ ಅಕ್ರಮ ಗಣಿಗಾರಿಕೆ ಮತ್ತದರ ಪರಿಣಾಮದ್ದೇ ಸದ್ದು. ಈ ನಡುವೆ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಜತೆಗೆ ಮಣ್ಣು ಗಣಿಗಾರಿಕೆಯೂ ಹೊಸದಾಗಿ ಸೇರ್ಪಡೆಗೊಂಡಿದೆ.
ತಾಲೂಕಿನ  ನಾನಾ ಕಡೆ ಹಲವು ವರ್ಷಗಳಿಂದ ಅಕ್ರಮ ಮರಳು ಗಣಿಗಾರಿಕೆ ಅವ್ಯಾ ಹತವಾಗಿ ನಡೆಯುತ್ತಿದೆ. ಶಿಂಷಾ ನದಿ ಪಾತ್ರದ ನಿಷೇಧಿತ ಪ್ರದೇಶಗಳಲ್ಲೂ  ಕದ್ದು ಮುಚ್ಚಿ  ತೆಗೆಯಲಾಗುತ್ತಿದೆ. ಮರಳಿಗೆ ಮರುಳಾಗಿದ್ದವರು ಈಗ ಮಣ್ಣಿನ ವಾಸನೆ ಹಿಡಿದಿದ್ದಾರೆ.
ಸರಕಾರಿ ಭೂಮಿ ಸೇರಿದಂತೆ ಕೆಲವು ಕೆರೆಗಳ ಅಂಗಳದಲ್ಲಿ  ಮಣ್ಣು ತೆಗೆಯಲಾಗುತ್ತಿದೆ. ಇದರಿಂದ ಬಹುತೇಕ ಸರಕಾರಿ ಭೂಮಿ, ಕೆರೆಗಳು ಹಳ್ಳಗಳಾಗಿ ಮಾರ್ಪಟ್ಟಿವೆ. ಪ್ರಮುಖವಾಗಿ ಸೋಮನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ರುದ್ರಾಕ್ಷಿಪುರ ಗ್ರಾಮದ ಕೆರೆಯಲ್ಲಿ  ಮಣ್ಣು ಗಣಿಗಾರಿಕೆ ನಡೆಯುತ್ತಿದೆ.
ಆರು ತಿಂಗಳಿಂದ ನಿರಂತರವಾಗಿ ಇದು ನಡೆಯುತ್ತಿದೆ. ಪರಿಣಾಮ ಬಹುತೇಕ ಕೆರೆಯಂಗಳದಲ್ಲಿ ರಾತ್ರಿ ವೇಳೆ ಇಟಾಚಿ, ಜೆಸಿಬಿ ಯಂತ್ರಗಳದ್ದೇ ಸದ್ದು. ತೆಗೆದ ಮಣ್ಣನ್ನು  ಟ್ರ್ಯಾಕ್ಟರ್, ಟಿಪ್ಪರ್‌ಗಳ ಮೂಲಕ ಸಾಗಿಸ ಲಾಗುತ್ತಿದೆ. ಇದರಿಂದ ಕೆರೆಗಳಲ್ಲಿ  ೩೦ರಿಂದ ೪೦ಅಡಿ ಆಳದ ಗುಂಡಿಗಳು ಸೃಷ್ಟಿಯಾಗುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ